ಬೆಂಗಳೂರು, ಆಗಸ್ಟ್ ೩ ೨೦೧೨- ‘ಬಾಂಗ್ಲಾದೇಶದಲ್ಲಿಯೂ ನಾಗರಿಕ ಸೇವೆಗಳ ಖಾತರಿ ಕಾಯಿದೆ ಜಾರಿಯಲ್ಲಿದೆ.
ಇದೀಗ ೬೫ ಸೇವೆಗಳನ್ನು ೧೬ ಜಿಲ್ಲೆಗಳಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಜನಸಾಮಾನ್ಯರಿಗೆ ಇನ್ನೂ ಉತ್ತಮ ಸೇವೆ
ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಸಕಾಲಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದೇ ಮಾದರಿಯನ್ನು
ಬಾಂಗ್ಲಾದೇಶದಲ್ಲಿಯೂ ಅನುಸರಿಸಲಾಗುವುದು’ ಎಂದು ಬಾಂಗ್ಲಾದೇಶದ ಹೆಚ್ಚುವರಿ ಕಾರ್ಯದರ್ಶಿ ಹಾಗೂ
ಬಂಗ್ಲಾದೇಶದಲ್ಲಿ ನಾಗರಿಕ ಸೇವೆಯನ್ನು ಬದಲಾಯಿಸುವ ಯೋಜನೆಯ ರಾಷ್ಟ್ರೀಯ
ನಿರ್ದೇಶಕರಾದ ಶ್ರೀ ಮಹಮ್ಮದ್ ಯೂನ್ನುಸುರ್ ತಿಳಿಸಿದರು. ಕರ್ನಾಟಕ ಸರ್ಕಾರದ ಜನಪರವಾದ
ಮತ್ತು ಇ-ಆಡಳಿತ ವ್ಯವಸ್ಥೆಯ ಅಧ್ಯಯನಕ್ಕೆಂದು ಶ್ರೀ ಮಹಮ್ಮದ್ ಯೂನ್ನುಸುರ್ ರಹಮಾನ್ ಅವರ
ತೃತ್ವದಲ್ಲಿ ಇಂದು ನಗರಕ್ಕೆ ಆಗಮಿಸಿದ್ದ ಬಾಂಗ್ಲಾದೇಶದ ಉನ್ನತ ಅಧಿಕಾರಿಗಳ ತಂಡಕ್ಕೆ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಸಕಾಲ, ಮಾಹಿತಿ,
ನೆಮ್ಮದಿ, ಭೂಮಿ, ಸಾರಿಗೆ, ಹೆಚ್.ಆರ್.ಎಂ.ಎಸ್, ಯೋಜನೆಗಳ ಕುರಿತು ಉದಾಹರಣೆಗಳ
ಸಮೇತ ವಿವರಣೆ ನೀಡಲಾಯಿತು.ಬಾಂಗ್ಲಾದೇಶದ ತಂಡವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ
ಸರ್ಕಾರದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಶ್ರೀ ಸುಬೀರ್ ಹರಿಸಿಂಗ್, ‘ತಂತ್ರಜ್ಞಾನ ಆಧಾರಿತ
ಕಾರ್ಯನಿರ್ವಹಣೆಯ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಬದಲಾವಣೆಗೆ ತರೆದುಕೊಂಡಾಗ ಮಾತ್ರ ಹೊಸ ಯೋಜನೆಗಳು ಯಶಸ್ವಿಯಾಗುತ್ತz’ ಎಂದು ತಿಳಿಸಿದರು. ‘ರಾಜ್ಯದಲ್ಲಿ ಜಾರಿಗೆ
ತರಲಾಗುತ್ತಿರುವ ಈ ವಿಶೇಷ ಯೋಜನೆಗಳ ಯಶಸ್ಸಿಗೆ ಸರ್ಕಾರಿ ನೌಕರರ ಸೇವಾ ಮನೋಭಾವ
ಕೂಡ ಕಾರಣ.’ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ: ಶಾಲಿನಿ
ರಜನೀಶ್ ಹಾಗೂ ಸಕಾಲ ಮಿಷನ್ ಹೆಚ್ಚುವರಿ ನಿರ್ದೇಶಕರಾದ ಶ್ರೀ ಮೌದ್ಗಿಲ್ ಜನಸಾಮಾನ್ಯರಿಗೆ
ನಾಗರಿಕ ಸೇವೆಗಳನ್ನು ನಿರ್ದಿಷ್ಠ ಅವಧಿಯಲ್ಲಿ ಒದಗಿಸುವ ಸಕಾಲ ಯೋಜನೆಯ
ಬಗೆಗೆ ವಿವರಣೆ ನೀಡಿದರು. ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ
ಶ್ರೀ ಪಾಂಡೆ ಮಾತನಾಡಿ‘ಸರ್ಕಾರ ಅನುಷ್ಠಾನಕ್ಕೆ ತಂದಿರ್













