ಬೆಂಗಳೂರು: ಆ. ೧೮ ಗೃಹಾಧಾರಿತ ಶಿಕ್ಷಣ ಕೇಂದ್ರಗಳಲ್ಲಿ ವಸತಿ ಪಡೆದಿರುವ ವಿಕಲಚೇತನ ಮಕ್ಕಳನ್ನು ಶಾಲಾಧಾರಿತ ಶಿಕ್ಷಣ ಕೇಂದ್ರಕ್ಕೆ ಸೇರಿಸಬೇಕೆಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಉಪನಿರ್ದೇಶಕರು ಪೋಷಕರಿಗೆ ತಿಳಿಸಿದ್ದಾರೆ. ಗೃಹಾಧಾರಿತ ಶಿಕ್ಷಣ ಕೇಂದ್ರದಿಂದ ಶಾಲಾಧಾರಿತ ಶಿಕ್ಷಣ ಕೇಂದ್ರಕ್ಕೆ ಸಿದ್ಧಗೊಳಿಸಲು ೩೧ ಶಾಲಾ ಸಿದ್ಧತಾ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳು ವಾರದಲ್ಲಿ ಸೋಮವಾರ ಮತ್ತು ಬುಧವಾರ ಕಾರ್ಯ ನಿರ್ವಹಿಸುತ್ತವೆ. ಮಕ್ಕಳು ಕೇಂದ್ರಕ್ಕೆ ಬಂದು ಹೋಗಲು ಒಂದು ತಿಂಗಳಿಗೆ ರೂ. ೩೦೦-೦೦ ಪ್ರಯಾಣ ಭತ್ಯೆಯನ್ನು ನೀಡಲಾಗುವುದು. ಪೋಷಕರು ಇದರ ಪ್ರಯೋಜನ ಪಡೆದು ತಮ್ಮ ಮಕ್ಕಳನ್ನು ಶಾಲಾ ಸಿದ್ಧತಾ ಕೇಂದ್ರದ ಶಾಲೆಗೆ ದಾಖಲಿಸಲು ಕೋರಿದೆ. ಹೆಚ್ಚಿನ ವಿವರಗಳಿಗೆ ಆಯಾ ವಲಯದ ಕ್ಷೇತ್ರ ಶಿಕ್ಷಣ ಅಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.













