ಬೆಂಗಳೂರು, ಆಗಸ್ಟ್ ೧೮ : ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು ಯುವತಿಯರಿಗಾಗಿ ಸ್ವಯಂಉದ್ಯೋಗ ಒದಗಿಸಿಕೊಡುವ ನಿಟ್ಟಿನಲ್ಲಿ ಬ್ಯೂಟಿಷಿಯನ್ ಕೋರ್ಸ್ ತರಬೇತಿ ಶಿಬಿರವನ್ನು ಆಗಸ್ಟ್ ೩೦ ರಿಂದ ಸೆಪ್ಟೆಂಬರ್ ೧೩ ರವರೆಗೆ ನೃಪತುಂಗ ರಸ್ತೆಯಲ್ಲಿರುವ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಯುವ ಕೇಂದ್ರದಲ್ಲಿ ನಡೆಸಲಿದೆ. ಶಿಬಿರದಲ್ಲಿ ೧೫ ರಿಂದ ೩೦ ವರ್ಷದೊಳಗಿನ ಯುವತಿಯರು ಭಾಗವಹಿಸಲು ಅರ್ಹರಾಗಿರುತ್ತಾರೆ. ಆಸಕ್ತ ಯುವತಿಯರು ಆಗಸ್ಟ್ ೨೭ ರೊಳಗಾಗಿ ಸಹಾಯಕ ನಿರ್ದೇಶಕರು, ರಾಜ್ಯ ಯುವ ಕೇಂದ್ರ, ನೃಪತುಂಗ ರಸ್ತೆ, ಬೆಂಗಳೂರು ಇವರಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ೦೮೦-೨೨೨೧೪೯೧೧/ಮೊಬೈಲ್ ಸಂಖ್ಯೆ: ೯೪೮೦೮೮೬೫೩೭ ಸಂಪರ್ಕಿಸಬಹುದು.













