ಬೆಂಗಳೂರು ನಗರ ಪೊಲೀಸ್ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ದಕ್ಷಿಣ ವಿಭಾಗದ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಮಾನ್ಯ ಪೊಲೀಸ್ ಕಮೀಷನರ್ ಬಿ.ಜಿ. ಜ್ಯೋತಿಪ್ರಕಾಶ್ ಮಿರ್ಜಿ, ಐಪಿಎಸ್ ರವರು ಉದ್ಘಾಟನೆಯನ್ನು ಮಾಡಿರುತ್ತಾರೆ.ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪ್ರವೀಣ್ ಸೂದ್, ಐ.ಪಿ.ಎಸ್, ಮಾನ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಪೊಲೀಸ್ ಕಂಪ್ಯೂಟರ್ ವಿಂಗ್, ಕರ್ನಾಟಕ ರಾಜ್ಯ, ಪ್ರಣವ ಮಹಾಂತಿ, ಐಪಿಎಸ್, ಮಾನ್ಯ ಹೆಚ್ಚುವರಿ ಪೊಲೀಸ್ ಆಯುಕ್ತರು, ಅಪರಾಧ (ಪಶ್ಚಿಮ) ಹಾಗೂ ಈಶ್ವರ್ ಪ್ರಸಾದ್, ಪೊಲೀಸ್ ಅಧೀಕ್ಷಕರು, ರಾಜ್ಯ ಅಪರಾಧ ದಾಖಲಾತಿ ವಿಭಾಗ ರವರುಗಳು ಭಾಗವಹಿಸಿದ್ದು, ಈ ಸಮಾರಂಭದ ಅಧ್ಯಕ್ಷತೆಯನ್ನು ಸೋನಿಯಾ ನಾರಂಗ್, ಐ.ಪಿ.ಎಸ್, ಮಾನ್ಯ ಉಪ-ಪೊಲೀಸ್ ಕಮೀಷನರ್, ದಕ್ಷಿಣ ವಿಭಾಗ ರವರು ವಹಿಸಿರುತ್ತಾರೆ.













