ಬೆಂಗಳೂರು, ಆ. ೧೮: ಡಿ.ದೇವರಾಜ ಅರಸು ಅವರ ೯೭ನೇ ಜನ್ಮದಿನಾಚರಣೆ ಅಂಗವಾಗಿ ನೀಡಲಾಗುವ ಡಿ.ದೇವರಾಜ ಅರಸು ಪ್ರಶಸ್ತಿಗೆ ರಾಜ್ಯಮಟ್ಟದಲ್ಲಿ ಹಿರಿಯ ಪತ್ರಕರ್ತ ಶ್ರೀ ದಿನೇಶ್ ಅಮಿನ್ ಮಟ್ಟು ಅವರನ್ನು ಆಯ್ಕೆ ಮಾಡಲಾಗಿದೆ.ಡಾ. ಚಂದ್ರಶೇಖರ ಕಂಬಾರ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಶಿಫಾರಸಿನಂತೆ ಸರ್ಕಾರವು ಪ್ರಶಸ್ತಿ ಪ್ರಕಟಿಸಿದ್ದು, ರಾಜ್ಯಮಟ್ಟದ ಪ್ರಶಸ್ತಿಯು ರೂ. ೧ ಲಕ್ಷ ನಗದು ಬಹುಮಾನವನ್ನೊಳಗೊಂಡಿದೆ.ವಿಭಾಗಮಟ್ಟದಲ್ಲಿ ನೀಡಲಾಗುವ ೮ ಪ್ರಶಸ್ತಿಗಳಿಗೆ ಆಯ್ಕೆಯಾದ ಸಂಘ-ಸಂಸ್ಥೆ/ ವ್ಯಕ್ತಿಗಳ ವಿವರ ಹೀಗಿದೆ: ಬೆಂಗಳೂರು ವಿಭಾಗ: ಶ್ರೀ ವಿಶ್ವಕರ್ಮ ರಥ ಶಿಲ್ಪ ಕಲಾ ಸಂಸ್ಥೆ, ಬೆಂಗಳೂರು, ಶ್ರೀ ಶಾರದಾ ವಿದ್ಯಾ ಸಂಸ್ಥೆ, ಬೆಳಗೆರೆ, ಚಿತ್ರದುರ್ಗ, ಶ್ರೀಮತಿ ನರಸಮ್ಮ, ಕೃಷ್ಣಾಪುರ, ವೆಂಕಟಾಪುರ ಅಂಚೆ, ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ ಬೆಳಗಾವಿ ವಿಭಾಗ : ಶ್ರೀ ಭೀಮರಾವ್ ಬಿ. ಗಸ್ತಿ, ಶ್ರೀ ಕಾಶೀನಾಥ ಬಿ. ಹುಡೇದ, ಲೋಕಾಪುರ ಗ್ರಾಮ, ಮುಧೋಳ ತಾ: ಬಾಗಲಕೋಟೆ ಜಿಲ್ಲೆ ಗುಲ್ವರ್ಗಾ ವಿಭಾಗ: ಶ್ರೀ ವಜ್ರ ಕುಮಾರ್ ಜಿ. ಕಿವಡೆ, ಶ್ರೀ ಬಸವಣ್ಣಪ್ಪ ಎಂ. ಗೌನಳ್ಳಿ, ಶಾಸ್ತ್ರಿ ಚೌಕ, ಮು: ತಾ: ಜೇವರ್ಗಿ, ಮೈಸೂರು ವಿಭಾಗ: ಧಿನಬಂಧು ಸಂಸ್ಥೆ, ಚಾಮರಾಜನಗರ













