ಜೂನ್ 1ರಿಂದ 24ರವರೆಗೆ ಮಾವು, ಹಲಸು ಮೇಳ

Digg This
Share on Myspace

ಬೆಂಗಳೂರು, 31st May: ಲಾಲ್‌ಬಾಗ್‌ನಲ್ಲಿ ಜೂನ್ 1ರಿಂದ 24ರವರೆಗೆ ಮಾವು ಹಾಗೂ ಹಲಸಿನ ಹಣ್ಣುಗಳ ಮೇಳವನ್ನು ಆಯೋಜಿಸಲಾಗಿದೆ` ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕಿ ಪಿ. ಹೇಮಲತಾ ಅವರು ತಿಳಿಸಿದರು.

ತೋಟಗಾರಿಕೆ ಇಲಾಖೆ ನಿರ್ದೇಶಕಿ ಪಿ. ಹೇಮಲತಾ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, `ಲಾಲ್‌ಬಾಗ್‌ನ ಗಾಜಿನಮನೆ ಮುಂಭಾಗದಲ್ಲಿ ನಡೆಯುವ ಮೇಳದಲ್ಲಿ ಸುಮಾರು 100 ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 7 ಗಂಟೆವರೆಗೆ ನಡೆಯುವ ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಮೇಳದ ಮೊದಲ ಮೂರು ದಿನ ಹಣ್ಣುಗಳ ಪ್ರದರ್ಶನ ನಡೆಯಲಿದೆ` ಎಂದರು.

ಬೆಳೆಗಾರರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವುದು, ಬೆಳೆಗಾರರಿಗೆ ಯೋಗ್ಯ ಬೆಲೆ ಹಾಗೂ ಗ್ರಾಹಕರಿಗೆ ರುಚಿಯಾದ ಕಾರ್ಬೈಡ್ (ರಾಸಾಯನಿಕ ವಸ್ತು) ಮುಕ್ತ ತಾಜಾ ಹಣ್ಣುಗಳು ನ್ಯಾಯಯುತ ಬೆಲೆಗೆ ಸಿಗುವಂತೆ ಮಾಡುವುದು ಮೇಳದ ಮುಖ್ಯ ಉದ್ದೇಶ. 2011ರಲ್ಲಿ ನಡೆದ ಮೇಳದಲ್ಲಿ ಒಂದು ಸಾವಿರ ಟನ್ ಮಾವಿನ ಹಣ್ಣುಗಳು ಮಾರಾಟವಾಗಿದ್ದವು. ಈ ಬಾರಿಯ ಮೇಳದಲ್ಲಿ ಒಂದು ಸಾವಿರ ಟನ್‌ಗಿಂತ ಹೆಚ್ಚಿನ ಹಣ್ಣುಗಳು ಮಾರಾಟವಾಗುವ ನಿರೀಕ್ಷೆ ಇದೆ ಎಂದು ಹೇಳಿದರು.

ಹಣ್ಣಿನ ಗುಣಮಟ್ಟ ಪರೀಕ್ಷೆಗೆ ಹಾಗೂ ಬೆಲೆ ನಿಗದಿಗೆ ಸಮಿತಿಯೊಂದನ್ನು ರಚಿಸಲಾಗಿದೆ. ಆ ಸಮಿತಿಯ ಸದಸ್ಯರು ಮೇಳದಲ್ಲಿ ಪ್ರತಿನಿತ್ಯ ಮಳಿಗೆಗಳಿಗೆ ಭೇಟಿ ನೀಡಿ ಹಣ್ಣಿನ ಗುಣಮಟ್ಟವನ್ನು ಪರೀಕ್ಷಿಸಲಿದ್ದಾರೆ ಎಂದರು.

Comments are closed

FEATURED LINKS