ಕರ್ನಾಟಕ ಸುರಕ್ಷಿತ ಪ್ರದೇಶ: ಈಶಾನ್ಯ ರಾಜ್ಯದವರಿಗೆ ಉಪಮುಖ್ಯಮಂತ್ರಿಗಳ ಅಭಯ

Digg This
Share on Myspace

ಬೆಂಗಳೂರು, ಆಗಸ್ಟ್ ೧೮:  ಈಶಾನ್ಯ ರಾಜ್ಯದವರ ರಕ್ಷಣೆಗೆ ಕರ್ನಾಟಕದಲ್ಲಿ ಸೂಕ್ತ ಭದ್ರತಾ  ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಗಾಳಿಸುದ್ದಿ ಹಬ್ಬಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದೆಂದು ಉಪಮುಖ್ಯಮಂತ್ರಿ ಶ್ರೀ ಆರ್.ಅಶೋಕ್ ತಿಳಿಸಿದರು. ಅರುಣಾಚಲ ಪ್ರದೇಶದ ಲೋಕಸಭಾ ಸದಸ್ಯರಾದ ಶ್ರೀ ಸಂಜಯ್ ಧಕಂ, ಹಾಗೂ ನವದೆಹಲಿಯ ಅರುಣಾಚಲ ಪ್ರದೇಶ ಭವನ್‌ದ ರೆಸಿಡೆಂಟ್ ಕಮಿಷನರ್ ಶ್ರೀ ಲೇಖಾ ಮಚ್ ರವರು ಇಂದು ಗೃಹ ಮಂತ್ರಿ ಶ್ರೀ ಆರ್.ಅಶೋಕ್ ಅವರನ್ನು ಗೃಹ ಕಚೇರಿಯಲ್ಲಿ ಭೇಟಿ ಮಾಡಿ ರಾಜ್ಯದಲ್ಲಿನ ಪರಿಸ್ಥಿತಿಯನ್ನು ಚರ್ಚಿಸಿದ ಸಂದರ್ಭದಲ್ಲಿ ಅವರಿಗೆ ಭರವಸೆ ನೀಡಿದ ಉಪಮುಖ್ಯಮಂತ್ರಿ ಶ್ರೀ ಅಶೋಕ್ ರವರು, ರಾಜ್ಯದಲ್ಲಿ ನೆಲೆಸಿರುವ ಈಶಾನ್ಯ ಭಾಗದ ಜನವರಿಗೆ ಬೆದರಿಕೆ ಹಾಕಿರುವ, ಹಲ್ಲೆ ನಡೆಸಲು ಯತ್ನಿಸುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.  ಈಶಾನ್ಯ ಭಾರತ ರಾಜ್ಯಗಳ ಜನತೆ ಭಯದಿಂದ ರಾಜ್ಯವನ್ನು ತೊರೆಯಬೇಕಾಗಿಲ್ಲ ಎಂದು ಆಶ್ವಾಸನೆ ನೀಡಿದರು. ರಾಜ್ಯ ಸರ್ಕಾರದ ಕ್ರಮಗಳ ಕುರಿತು ಅರುಣಾಚಲ ಪ್ರದೇಶದ ಸಂಸದ ಹಾಗೂ ಅಧಿಕಾರಿಗಳು ತೃಪ್ತಿ ವ್ಯಕ್ತಪಡಿಸಿ, ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದರು.

 

 

Comments are closed

FEATURED LINKS